Life that I lived

To Say or Not To Say........ To Write or Not To Write.... To Smile or Not To Smile.... To Cry or Not to Cry........ To Dwell or Not to Dwell.... I have now decided to pour it all.... and pour it all here.

Thursday, 8 December 2011

ಮಾಂಗಲ್ಯ

ಅಮ್ಮ ಹೇಳ್ತಿದ್ದ ನೆನಪು.. ಮಾಂಗಲ್ಯ ಅಂದ್ರೆ ಹೆಣ್ಣಿಗೆ ಗಂಡನ ರಕ್ಷಣೆ... ಕಾಲುಂಗುರ ಅವಳ ಹೆಜ್ಜೆಗೆ ಗುಣವೊಂದನ್ನು ಸೋಕಿಸುತ್ತದೆ... ಹಣೆಯಲ್ಲಿ ಕುಂಕುಮ ಅವಳ ಮನಸಿನ ಭಾವನೆಗಳ  ಏರಿಳಿತಗಳಿಗೆ ಸಾಂತ್ವನ ಹೇಳುವಂತದ್ದು...ಹೂವು ಕೈಬಳೆಗಳು ಅವಳ ಶೋಭೆಗೆ ಒಡವೆಗಳು ....
ಅಮ್ಮನ ಈ ರೀತಿಯ ನಡವಳಿಕೆ ಗುಣಗಳನ್ನ ನೋಡುತ್ತಾ ಬೆಳೆದವಳು ನಾನು.. ಅಪ್ಪನ ಮೇಲೆ ಇದ್ದ ಅಪಾರ ಪ್ರೀತಿ ಹಾಗು ಮಾಂಗಲ್ಯ ಕುಂಕುಮ ಬಳೆ ಕಾಲುಂಗುರಗಳಿಗಿದ್ದ ಗೌರವ ಅಮ್ಮನಿಂದಲೇ ಕಲೆತದ್ದು... ಮಾಂಗಲ್ಯವನ್ನು ಯಾವುದೇ ಕಾರಣಕ್ಕೂ ಕುತ್ತಿಗೆಯಿಂದ ತೆಗೆಯಬಾರದು.. ಅಂತ ಅಮ್ಮ ಹೇಳಿದ್ದು ಈಗಲೂ ಸಹ ಕಿವಿಯಲ್ಲಿ ಗುನಗುತ್ತಿದೆ...
================
ಬಾಬು ನಿನ್ನ ಮದುವೆಯ ನಂತರ ನಾನು ಅಕ್ಷರ ಸಹ ಇವುಗಳನ್ನ ಪಾಲಿಸಿದ್ದು ನಿಜ ..
================
ಮದುವೆಯ ಹೊಸತರಲ್ಲಿಂದ ಹಿಡಿದು ಇಲ್ಲಿಯ ತನಕ - ನನ್ನನ್ನು ಹಿಗ್ಗ ಮುಗ್ಗ ಹೊಡೆದಾಗೆಲ್ಲ ಕುತ್ತಿಗೆಯಿಂದ ನೀನು ನನ್ನ ಮಾಂಗಲ್ಯವನ್ನು ಕಿತ್ತೆಸೆಯುತಿದ್ದ ನೆನಪು ಇನ್ನೂ ಹಸಿರು..
- ಚೂರು-ಚೂರಾದ ಮಾಂಗಲ್ಯಸರ 
- ಕಳೆದುಹೋದ ಚಿನ್ನದ ಮಣಿಗಳು
- ಒಸಕಿ ಹೋದ ಚಿನ್ನದ ಕಂಬಿಗಳು
- ಪೋಣಿಸಿಟ್ಟ ಗುಂಡುಗಳಿಂದ ಉದುರಿಹೊಗುತ್ತಿದ್ದ ಬಿಳಿಕಲ್ಲುಗಳು
- ಜೊತೆಗೆ ಕುತ್ತಿಗೆಯ ಮೇಲೆ ಸರವನ್ನು ಕಿತ್ತೆಸೆದಾಗ ತರುಚುವಂಥ ಗಾಯಗಳು...

ನೀನೇನೋ ಏನೂ ಆಗದಂತೆ ಕುಡಿಯಲು ಹೊರಟುಹೋಗ್ತಿದ್ದೆ... ಕಣ್ಣೀರಿಡುತ್ತಾ.. ಅಲ್ಲಿ ಇಲ್ಲ ಬಿದ್ದ ಚೂರುಗಳನ್ನ ಹುಡುಕಿಕೊಂಡು, ನಂತರ ಚಿನ್ನದ ಅಂಗಡಿಗೆ ಹೋಗಿ ರೆಪೇರಿ ಮಾಡಿಸಿಕೊಂಡು ಮತ್ತೆ ಕುತ್ತಿಗೆಗೆ ನೇತಾಕಿಕೊಳ್ಳುತ್ತಿದ್ದ ಆ ಮಾಂಗಲ್ಯ .... ನಿನ್ನ ಈ ಅವಾಂತರಗಳ ನಡುವೆ ತರಚಿ-ಪರಚಿ ಹೋಗುತ್ತಿದ್ದ ನನ್ನ ಪ್ರೀತಿಯ ಹೃದಯ...
ಈಗಲೂ ಸಹ ಅರಿಶಿನ ಕುಂಕುಮ ನಾನು ಹಚ್ಚಿಕೊಂಡಾಗಲೆಲ್ಲ .... ಆ ಮಾಂಗಲ್ಯಕ್ಕೆ ಹರಿಶಿನ ಇಟ್ಟು ಕಣ್ಣಿಗೆ ಒತ್ತಿಕೊಳ್ಳುವ  ಅಭ್ಯಾಸ ತಪ್ಪಿಲ್ಲ!

0 Comments:

Post a Comment

Subscribe to Post Comments [Atom]

<< Home