10th August 2011
ಇವತ್ತು ಬುಧವಾರ - ಈ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬ. ಬಾಬು ಇಲ್ಲಿಲ್ಲ - ಇದ್ದರೂ ಯಾವ ರೀತಿ ಸಾಹಾಯವಾಗಲಿ, ಏನು ಬೇಕು, ಏನು ಬೇಡವಾಗಲಿ ಕೇಳುತ್ತಿರಲಿಲ್ಲ. ಹಬ್ಬದ ದಿನವೂ ಕುಡಿದುಕೊಂಡು ತೂರಾಡುತಿದ್ದ ನೆನಪು.
ಮನೆಯಲ್ಲಿ ಬೆಳಗಿನ ಕೆಲಸ ಮುಗಿಸಿ, ಆಫೀಸ್ ಕೆಲಸ ಮುಗಿಸಿ, ಮನೆಗೆ ಬರುವಾಗ ವಿಜಯನಗರದ ಮಾರ್ಕೆಟ್ನಲ್ಲೆ ಇಳಿದು - ಹಬ್ಬಕ್ಕೆ ಬೇಕಾದ ಸಾಮಾನುಗಳನ್ನೆಲ್ಲ ಹಿಡಿದುಕೊಂಡು - ಆಟೋ ಹಿಡಿದು ಮನೆಗೆ ಬಂದಾಗ - ಅದೇ ಬಾಬು, ಅದೇ ಕುಡಿತ, ಅದೇ ವರ್ತನೆ. ಇನ್ನು ರಾತ್ರಿಯ ಅಡುಗೆ ಮುಗಿಸಿ, ನಾಳೆ ಹಬ್ಬಕ್ಕೆ ಏನೇನು ಮಾಡಬೇಕು ಅನ್ನೋದನ್ನ ಲೆಕ್ಕ ಹಾಕಿ - ಮಗಳಿಗೆ ಗೋರಂಟಿ ಹಚ್ಚುವ ಕೆಲಸ.
ನಮ್ಮ ಮನೆ ಲಕ್ಷ್ಮಿ - ನನ್ನ ಮಗಳು - ಅವಳು ನೊಂದರೆ ನನ್ನ ಮನೆ ನನ್ನ ಮನ ನಗಲು ಸಾಧ್ಯವೇ ಇಲ್ಲ. ಈ ನೊಂದ ಮನೆ ಮನಗಳಲ್ಲಿ ಆಚರಿಸಲು ಹೊರಟೆವು "ಶ್ರೀ ವರಮಹಾಲಕ್ಷ್ಮಿ" ಪೂಜೆ. ಎದುರುಸಿತ್ತಿರುವ ಕಷ್ಟಗಳನ್ನ ಸಹಿಸಿ ಮುಂದೆಸಾಗುವ ಧೈರ್ಯದ ವರವನ್ನು ಬೇಡುತ್ತಾ .......

0 Comments:
Post a Comment
Subscribe to Post Comments [Atom]
<< Home