11th August 2011
ಕಳೆದು ಹೋದದ್ದು .... ಬರಿಯ ಉಂಗುರವಾಗಿರಲಿಲ್ಲ
ನಾನು ಮತ್ತು ನನ್ನೆಲ್ಲ .... ಬದುಕು
ನಾನು ಮತ್ತು ನನ್ನೆಲ್ಲ .... ಬದುಕು
--------------------
ಈ ಸಾಲುಗಳು ಕವನದ ಮಧ್ಯೆ ಕದ್ದಿದ್ದು - ಮತ್ತೆ ಮತ್ತೆ ಓದುವ ಮನಸಾಗ್ತಿತ್ತು.
ನೆನ್ನೆ ಸಂಜೆ ಮಗಳಿಗೆ ಹೊಸಬಟ್ಟೆ ಕೊಳಲ್ಲು ಹೋಗಿದ್ದೆ. ಅವಳ choice of selection ನನಗೆ ತುಂಬಾ ಹಿಡಿಸುತ್ತೆ. ಗಂಭೀರವಾದ ಅವಳಿಗೆ ಹೋಲುವ ಬಟ್ಟೆಯನ್ನೇ ಅವಳು select ಮಾಡೋದು. ಖುಶಿಆಗುತ್ತೆ - ಮಕ್ಕಳು ಹೊಸಬಟ್ಟೆ ತೊಟ್ಟು ಖುಷಿಪಡುವ ರೀತಿ ನೋಡಿ.
--------------------
CYLINDER ಖಾಲಿ - ಅಡುಗೆ ಮಾಡ್ಲಿಕ್ಕೆ ಮತ್ತೊಂದು cylinder ಇಲ್ಲ. ಬಾಬು ನೆನಪಾಗ್ತಾನೆ - ಮನೆ ಕೊಳ್ಳೆಹೊಡೆದ ಅವನ ಖಾಸಗಿ ರೀತಿಗೆ. ಇದ್ದ ಎರಡು cylinder ಹಾಗು gas stove ಗಳನ್ನೂ ಮಾರಿಬಿಟ್ಟಿದ್ದ. ಅದನ್ನ ಮತ್ತೆ ಬಿಡಿಸಿಕೊಳ್ಳಲು ತುಂಬಾ ಎಣಗಬೇಕಾಯ್ತು, ಅಂತು ೪೫೦೦ ಕೊಟ್ಟು ಒಂದು cylinder ಮತ್ತು stove ಮಾತ್ರ ದಕ್ಕಿಸಿಕೊಂಡೆವು. ಇನ್ನು ಆ stove ನೋಡಿದಾಗಲೆಲ್ಲ ಅವನ ನೀಚ ಕರ್ಮಗಳು ನೆನಪಾಗುತ್ತದೆ - ಆದಕಾರಣ ಹೊಸ stove ಕೊಂಡಿದ್ದು.
--------------------
ಏನೆಆಗಲಿ ನೆನಪು ಅನ್ನೋದು ತುಂಬಾ ವಿಚಿತ್ರ - ಪಾದರಸದಂತೆ, ಕೈಗೆಟುಕದೆ, ನಿಲ್ಲದೆ, ಮೆದುಳಿನ ಎಲ್ಲಾ ಬಾಗಗಳಲ್ಲಿ ಓಡಾಡ್ತಿರುತ್ತೆ..... ಅವನ ನೆನಪು ಸಹ ಹಾಗೆ, ಮರೆಯೋಕಾಗದ ಅವನ ಅವಗುಣಗಳು, ಅವಲಕ್ಷಣಗಳು.... ತುಂಬಾ ಕಾಡುತ್ತೆ. ಬೆಳಗ್ಗೆ ಎದ್ದಾಗಿನಿಂದ ಬಾಬುವಿನ ನೆನಪು ಸುಮಾರು ೧೦೦ ಕ್ಕಿಂತ ಹೆಚ್ಚುಬಾರಿ ಬಂದಿರಬಹುದು.
ನೆನಪು ಅನ್ನೋದು ನಿಜವಾಗಿಯೂ ವಿಚಿತ್ರ.
--------------------

0 Comments:
Post a Comment
Subscribe to Post Comments [Atom]
<< Home